Select the language

ಇತ್ಯಾದಿ

ಒಂದು ಅಪರೂಪದ ಸಮಾರಂಭ ನೂರು ವರ್ಷ ತುಂಬಿರುವ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಿಗೆ ಎಂಹೆಚ್ಎಸ್. ಹಾಲ್, ಲಾಲ್ ಬಾಗಿನಲ್ಲಿ 11/10/2015 ಭಾನುವಾರರಂದು ಸನ್ಮಾನ ಮಾಡಲಾಯಿತು. ಕರ್ನಾಟಕದ ಮೂಲೆ ಮೂಲೆಯಿಂದ ನೂರು ವರ್ಷ ತುಂಬಿರುವ ಹದಿನಾರು ಜನ ಸ್ವಾತಂತ್ರ್ಯ ಯೋಧರು ಇದರಲ್ಲಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಇನ್ನೂರು ಶ್ರೀಗಂಧದ ಸಸಿಗಳನ್ನು ವಿತರಿಸಲಾಯಿತು. 100 ಭಾರತದ ಧ್ವಜಗಳನ್ನು ಹಾರಿಸಲಾಯಿತು. ಅಂಧ ವಿದ್ಯಾರ್ಥಿಗಳಿಗೆ ಚದುರಂಗದ ಸ್ಪರ್ಧೆ ನಡೆಸಲಾಯಿತು. ನೇತ್ರದಾನ, ದೇಹದಾನ ಮತ್ತು ರಕ್ತದಾನದ ಶಿಬಿರ ನಡೆಸಲಾಯಿತು

10 - 10 - 2015

10-4-2015

ಹಿರಿಯ ಸ್ವತಂತ್ರ್ಯ ಹೋರಾಟಗಾರ, “ಕರ್ನಾಟಕದ ಆತ್ಮಸಾಕ್ಷಿಯಾದ” ಶ್ರೀ.ಹೆಚ್.ಎಸ್ ದೊರೆ ಸ್ವಾಮಿಯವರ 98ನೇ ವರ್ಷದ ಹುಟ್ಟುಹಬ್ಬದಂದು ಕನ್ನಡಿಗರ ಉದ್ಯೋಗ ವೇದಿಕೆಯವರು ತಮ್ಮ ಪ್ರಣಾಮಗಳನ್ನು ಸಲ್ಲಿಸಿದರು. ಅವರಿಗೆ ದೇವರು ಆಯ್ಯುರಾಆರೋಗ್ಯ ಕೊಟ್ಟು ಕರ್ನಾಟಕದ “ಮುಂದಿನ ಪೀಳಿಗೆಗೆ ದಾರಿ ದೀಪವಾಗಲೆಂದು”,“ಮಾರ್ಗದರ್ಶಕರಾಗಲೆಂದು” ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.


17-04-2015.

ಕನ್ನಡಿಗರ ಉದ್ಯೋಗ ವೇದಿಕೆ(ರಿ)ಯ ಸದಸ್ಯರು ಶ್ರೀ.ಎಸ್.ಆರ್.ಪಾಟೀಲ್ ಐಟಿ-ಬಿಟಿ ಮಂತ್ರಿಗಳನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ.ಕರ್ನಾಟಕದಲ್ಲಿ ಐಟಿ-ಬಿಟಿ ಯಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಸಮಸ್ಯೆಗಳ ಬಗ್ಗೆ ಹಾಗೂ ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರ ಉದ್ಯೋಗಾವಕಾಶಗಳ ಬಗ್ಗೆ ಚರ್ಚೆ ಮಾಡಿದರು. ಮಾನ್ಯ ಮಂತ್ರಿಗಳು ಸಮಸ್ಯೆಗಳನ್ನು ಪರಿಹಾರ ಮಾಡುವುದಾಗಿ ಭರವಸೆ ನೀಡಿದರು.