Select the language

ಕನ್ನಡಿಗರ ಉದ್ಯೋಗ ವೇದಿಕೆಗೆ ಸ್ವಾಗತ

ನೋಂದಣಿ ನಮೂನೆ

ಕನ್ನಡಿಗರ ಉದ್ಯೋಗ ವೇದಿಕೆಯು(ರಿ) ಕರ್ನಾಟಕದಲ್ಲಿ ಕನ್ನಡಿಗರ ಹಕ್ಕಿನ ಕುರಿತಾಗಿ ಕಾರ್ಯನಿರ್ವಹಿಸುತ್ತಿರುವ ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾಗಿದೆ. ಕನ್ನಡಿಗರ ಉದ್ಯೋಗ ಹಕ್ಕಿನ ಪರವಾಗಿ ಸತತ ಹೋರಾಡುತ್ತಿರುವ ದಕ್ಷ ಹೋರಾಟಗಾರ್ತಿ ಕನ್ನಡತಿ 'ವಿನುತಾ' ರ ನೋಂದಾಯಿತ ಸಂಸ್ಥೆ ಕ.ಉ.ವೇ (KUV).

ಕರ್ನಾಟಕದ ನಾಗರೀಕರಾಗಿ ರಾಜ್ಯದಲ್ಲಿರುವ ಖಾಸಗಿ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಪಡೆಯುವ ಅವಕಾಶ ಹೊಂದುವುದು ನಮ್ಮ ಹಕ್ಕಾಗಿರುತ್ತದೆ. ಆ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಮತ್ತು ದುರಾದೃಷ್ಟವಶಾತ್ ನಾವು ನಮ್ಮ ಹಕ್ಕೊತ್ತಾಯವನ್ನು ಮಾಡದೆ ಸುಮ್ಮನಿದ್ದೇವೆ.

ಕನ್ನಡಿಗರ ಉದ್ಯೋಗ ವೇದಿಕೆಯನ್ನು ಬೆಂಬಲಿಸಲೂ, ಪ್ರೋತ್ಸಾಹಿಸಲು, ಹುರಿದುಂಬಿಸಲು, ಒತ್ತಾಸೆ ನೀಡಲು, ಸ್ವಯಂ ಸೇವಕರಾಗಲೂ, ಸಂಪನ್ಮೂಲ ವ್ಯಕ್ತಿಯಾಗಲೂ ಈ ಲಿಂಕ್ ನ್ನು ಕ್ಲಿಕ್ ಮಾಡಿ.

===================================================================================================

Support by signing this petition to fight against SBI and it's Affiliate employment discrimination towards Kannadiga's in Karnataka.

===================================================================================================

ಸ್ಟೇಟ್ ಬ್ಯಾಂಕ್ ಪರೀಕ್ಷೆಗಳು

ಪ್ರಿಯ ಬಂಧುಗಳೇ,
ಸ್ಟೇಟ್ ಬ್ಯಾಂಕ್/ ಅಸೋಸಿಯೆಟ್ ಬ್ಯಾಂಕಿನ ಕ್ಲರ್ಕ್ ಗಳ ಆಯ್ಕೆಯಲ್ಲಿ ಕನ್ನಡಿಗರಿಗೆ ತುಂಬಾ ಅನ್ಯಾಯವಾಗುತ್ತಾ ಇದೆ. ಈ ಸ್ಥಾನಕ್ಕೆ ಬರುವವರಿಗೆ ಅಲ್ಲಿನ ಭಾಷೆ ಓದಲು, ಬರೆಯಲು ಮತ್ತು ಮಾತಾನಾಡಲು ಬರಬೇಕೆಂದು ಬ್ಯಾಂಕಿನ ನೋಟಿಫಿಕೇಷನಲ್ಲಿ ಇದೆ. ಆದರೆ ಬ್ಯಾಂಕ್ ಅಧಿಕಾರಿಗಳು ಭಾಷೆ ಬರದ ಬೇರೆ ರಾಜ್ಯದವರನ್ನು ಅಡ್ಡದಾರಿಯಿಂದ ಕರ್ನಾಟದಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಕನ್ನಡಿಗರ ಉದ್ಯೋಗ ವೇದಿಕೆಯು ಈ ಮೇಲ್ ಯುದ್ದವನ್ನು ಹಮ್ಮಿಕೊಂಡಿದೆ ದಯವಿಟ್ಟು ಈ ಈ ಮೇಲ್ ನ್ನು ನೀವು ನಿಮ್ಮ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ, ಬಂಧು-ಬಳಗ, ಸ್ನೇಹಿತರು ಎಲ್ಲರಿಂದಲೂ ಈ ಕೆಳಗೆ ಕೊಟ್ಟಿರುವ ಮಿಂಚಂಚೆಗೆ ಕಳುಹಿಸಿ. ಕರ್ನಾಟಕವನ್ನು ಉಳಿಸಿ. (ಕನ್ನಡಿಗರೆಂದರೆ - 15 ವರ್ಷಗಳಷ್ಟು ಕಾಲ ಕರ್ನಾಟಕದಲ್ಲಿ ವಾಸವಾಗಿದ್ದು, ಕನ್ನಡವನ್ನು ಓದಲು, ಬರೆಯಲು ಹಾಗೂ ಮಾತನಾಡಬಲ್ಲವರು ಕನ್ನಡಿಗರು). ನೀವು ಈ ಮೇಲ್ ಮಾಡಬೇಕಾಗಿರುವ ಪತ್ರವನ್ನು ಲಗತ್ತಿಸಿದ್ದೆವೆ.. ಈ ಪತ್ರವನ್ನು ಕಾಪಿ ಪೇಸ್ಟ್ ಮಾಡಿ ಈ ಮೇಲ್ ಮಾಡಿ. chairman@sbi.co.in & gm.crpd@sbi.co.in

===================================================================================================

ಉಚಿತ ತರಬೇತಿ ಶಿಬಿರ

ಕನ್ನಡಿಗರ ಉದ್ಯೋಗ ವೇದಿಕೆಯು ಯುವಕ/ ಯುವತಿಯರಿಗಾಗಿ ಉಚಿತ ತರಬೇತಿ ಶಿಬಿರಗಳನ್ನು ಪ್ರಾರಂಭಿಸಿದೆ.