ನಮ್ಮ ಬಗ್ಗೆ
ಕನ್ನಡಿಗರ ಉದ್ಯೋಗ ವೇದಿಕೆಯು(ರಿ)ಲಾಭಾಪೇಕ್ಷೆಯಿಲ್ಲದ ನೋಂದಾಯಿತ ಸಂಸ್ಥೆಯಾಗಿದ್ದು, ಉದ್ಯೋಗದಿಂದ ವಂಚಿತರಾಗುತ್ತಿರುವ ಲಕ್ಷಾಂತರ ಕನ್ನಡದ ವಿಧ್ಯಾರ್ಥಿಗಳಿಗೆ/ಉದ್ಯೋಗಾರ್ಥಿಗಳಿಗೆ ತಮ್ಮ ಉದ್ಯೋಗದ ಹಕ್ಕಿನ ಮೂಲಕ ಕರ್ನಾಟಕದಲ್ಲಿ ಉದ್ಯೋಗ ಪಡೆಯಲು ನೆರವಾಗಲಿದೆ.
ಕರ್ನಾಟಕದಲ್ಲಿ ಉದ್ಯೋಗ ಪಡೆಯುವುದು ಕನ್ನಡಿಗರ (ಕನ್ನಡಿಗರೆಂದರೆ ಯಾರು?) ಜನ್ಮ ಸಿದ್ಧ ಹಕ್ಕು ಮತ್ತು ನಾವಿಲ್ಲಿ ನಿರಂತರ ನಿಮ್ಮೊಂದಿಗಿರಲು ಹಾಗೂ ನಿಮ್ಮ ಹಿತ ಕಾಯಲು ಬದ್ಧರಾಗಿರುತ್ತೆವೆ. ನಿಮಗೆ ಸರ್ಕಾರ/ಸಂಸ್ಥೆಗಳಿಂದ/ಉದ್ದಿಮೆಗಳಿಂದ ಎದುರಾಗುವ ಯಾವುದೇ ಅವಗಣನೆಗೆ ನಮ್ಮ ಪ್ರತಿರೋಧವಿರುತ್ತದೆ.
ನಮ್ಮ ಧ್ಯೇಯ
ಪ್ರತಿಯೊಬ್ಬ ಕನ್ನಡಿಗನು ಔದ್ಯೋಗಿಕವಾಗಿ ಸಧೃಡನಾಗಿಯೂ, ಸೂಕ್ತ ನೌಕರಿಯುಳ್ಳವನಾಗಿಯೂ ಇರುವಂತೆ ನೋಡಿಕೊಳ್ಳುವುದು.
ನಮ್ಮ ಗುರಿ
- ಕನ್ನಡಿಗರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಅರ್ಹರನ್ನಾಗಿ ಮಾಡುವುದು
- ಕನ್ನಡಿಗರಿಗೆ ಸೂಕ್ತ ಉದ್ಯೋಗವಕಾಶವನ್ನು ಒದಗಿಸುವುದು
- ಕನ್ನಡಿಗರ ಹಕ್ಕುಗಳನ್ನು ಕಾಯುವುದು
- ಅಗತ್ಯವಿರುವವರಿಗೆ ನೆರವನ್ನು ನೀಡುವುದು
ಸ್ಥಾಪಕಿ
ಕನ್ನಡಿಗರ ಉದ್ಯೋಗ ಹಕ್ಕನ್ನು ಕುರಿತು ಕನ್ನಡಿಗರ ಉದ್ಯೋಗ ವೇದಿಕೆಯ ಸ್ಥಾಪಕಿ ವಿನುತಾ ನಿರಂತರ ಹೋರಾಡುತ್ತಲೆ ಬಂದಿದ್ದಾರೆ.