Select the language

ನಮ್ಮ ಧ್ಯೇಯ

ಸಮಸ್ತ ಕನ್ನಡಿಗರನ್ನು ತಮ್ಮ ಉದ್ಯೋಗದ ಹಕ್ಕಿಗಾಗಿ ಹೋರಾಡಲು ಒಂದೇ ವೇದಿಕೆಯಡಿ ತರುವ ಧ್ಯೇಯದೊಂದಿಗೆ ಕ.ಉ.ವೇ ವನ್ನು ಆರಂಭಿಸಲಾಗಿದೆ.

ಕರ್ನಾಟಕದಲ್ಲಿರುವ ಕನ್ನಡಿಗರ ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಕರ್ನಾಟಕ ಸರ್ಕಾರವು ೧೯೮೩ ರಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಅದೇ 'ಸರೋಜಿನಿ ಮಹಿಷಿ ಸಮಿತಿ'. ಆ ಸಮಿತಿಯು ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗದ ಸ್ಥಿತಿಯನ್ನು ಅಧ್ಯಯಿಸಿ ತನ್ನ ವರದಿ ಹಾಗೂ ಶಿಫಾರಸ್ಸುಗಳನ್ನು ಕರ್ನಾಟಕ ಸರ್ಕಾರಕ್ಕೆ ಡಿಸೆಂಬರ್೩೦, ೧೯೮೬ ರಲ್ಲಿ ಸಲ್ಲಿಸಿತು. ಸರ್ಕಾರವು ವರದಿಯನ್ನು ತತ್ ಕ್ಷಣವೇ ಒಪ್ಪಿತಾದರೂ ಇಲ್ಲಿಯವರೆಗೂ ಜಾರಿ ತರುವಲ್ಲಿ ವಿಫಲವಾಗಿದೆ.

ಸಮಿತಿಯ ವರದಿಯಲ್ಲೇನಿದೆ?
ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗ ಪ್ರಾಶಸ್ತ್ಯವು:

  • ರಾಜ್ಯ ಸರ್ಕಾರದ ಕಛೇರಿಗಳಲ್ಲಿ – ೧೦೦%
  • ರಾಜ್ಯದ ಸಾರ್ವಜನಿಕ ಉದ್ದಿಮೆಗಳಲ್ಲಿ – ೧೦೦%
  • ಕೇಂದ್ರ ಸರ್ಕಾರದ ಕಛೇರಿಗಳಲ್ಲಿ
  • ಕೇಂದ್ರದ ಸಾರ್ವಜನಿಕ ಉದ್ದಿಮೆಗಳಲ್ಲಿ
  • ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ
  • ಖಾಸಗಿ ಉದ್ಯಮಗಳಲ್ಲಿ ( ಕಾರ್ಖಾನೆ / ಕಾರ್ಪೋರೇಟ್ / ಐಟಿ-ಬಿಟಿ ಇತ್ಯಾದಿ )

ಮೇಲಿನ ಪಟ್ಟಿಯಲ್ಲಿನ ೩,೪,೫,೬ ರಲ್ಲಿ

  • 'ಎ' ಶ್ರೇಣಿಯ ಉದ್ಯೊಗ – ೬೫%
  • 'ಬಿ' ಶ್ರೇಣಿಯ ಉದ್ಯೊಗ –೮೦%
  • 'ಸಿ' ಶ್ರೇಣಿಯ ಉದ್ಯೊಗ – ೧೦೦%
  • 'ಡಿ' ಶ್ರೇಣಿಯ ಉದ್ಯೊಗ – ೧೦೦%

ಕನ್ನಡಿಗರೆಂದರೆ ಯಾರು?
೧೫ ವರ್ಷಗಳಷ್ಟು ಕಾಲ ಕರ್ನಾಟಕದಲ್ಲಿ ವಾಸವಾಗಿದ್ದು, ಕನ್ನಡವನ್ನು ಓದಲು, ಬರೆಯಲು ಹಾಗೂ ಮಾತನಾಡಬಲ್ಲವರೇ ಕನ್ನಡಿಗರು.

ಭಾರತದ ಶಾಸಕಾಂಗದ ಪ್ರಕಾರ, ದೇಶದ ಯಾವುದೇ ಭಾಗದಲಾದರು ಹೋಗಿ ನೆಲೆಸಬಹುದು – ಸರಿಯಸ್ಟೆ

ಹಾಗಾದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಎಕೆ ಹೆಚ್ಚಿನ ಉದ್ಯೋಗಾವಕಾಶವನ್ನು ಕೊಡಬೇಕು.

ಏಕೆಂದರೆ ?

  • 1.ಭೂಮಿ:- ಯಾವುದೇ ಉದ್ಯಮ,ಇಂಡಸ್ಟ್ರಿ, ಕಂಪನಿ,ಸಂಸ್ಥೆಗಳು ಪ್ರಾರಂಭಿಸಲು ಬಂದರೆ ನಮ್ಮ ಸರ್ಕಾರ ನೂರರು ಎಕರೆ ಭೂಮಿಯನ್ನು ವಶಪಡಿಸಿಕೊಡು ಅವರಿಗೆ ಕೊಡುತ್ತದೆ. ಈ ಪ್ರಕ್ರಿಯೆಯಲ್ಲಿ ಸಾವಿರಾರು ಜನ ತಮ್ಮ ಬದುಕಿನ ಮೂಲವನ್ನೆ ಕಳೆದುಕೊಳ್ಳುತ್ತಾರೆ .ಅವರೆಲ್ಲ ಸಣ್ಣ ಪ್ರಮಾಣದ ರೈತರು,ವ್ಯವಸಾಯ ತೋಟಗಾರಿಕೆ,ಹೈನುಗಾರಿಕೆ,ಕುರಿಸಾಗಾಣಿಕೆ ಮುಂತಾದ ಕೃಷಿ ಪ್ರಧಾನವಾದ ಅವರ ಭೂಮಿಯನ್ನು ನಮ್ಮ ಸರ್ಕಾರ ಬಲವಂತವಾಗಿ ಕಿತ್ತುಕೊಂಡು ಈ ಉದ್ಯಮಿಗಳಿಗೆ ಕೊಡುತ್ತದೆ. ಸರ್ಕಾರದ ಈ ವರ್ತನೆಯಿಂದ
    ತಮ್ಮ ಬದುಕಿನ ಮೂಲವನ್ನೆ ಕಳೆದುಕೊಂಡವರು ಯಾರು..?
  • ನಮ್ಮ ಕನ್ನಡಿಗರು


  • 2. ನೋಂದಾಣಿಕೆ ಶುಲ್ಲ :-ಸಾಮಾನ್ಯ ಜನ ಒಂದಗುಲ ಭೂಮಿಯನ್ನ . ಖರೀದಿಸಿದರೂ,ಅದರ ನೋಂದಾಣಿಕೆಯಲ್ಲಿ ನಮ್ಮ ಸರ್ಕಾರ ಒಂದು ರೂಪಾಯಿಯನ್ನೂ ಕೂಡ ಕಡಿಮೆ ಮಾಡುವುದಿಲ್ಲ ಆದರೆ ಹೀಗೆ ರೈತರಿಂದ ವಶಪಡಿಸಿಕೊಡ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಉದ್ಯಮಿಗಳಿಗೆ ನೀಡುತ್ತದೆ .ನೂರಾರೂ ಎಕರೆ ಭೂಮಿಯ ನೋಂದಾಣಿಕೆಯಲ್ಲೂ ಅವರಿಗೆ ರಿಯಾಯಿತಿ ನೀಡುತ್ತದೆ.
    ಈ ರಿಯಾಯಿತಿಯಿಂದ ನಷ್ಟವಾದದ್ದು ಯಾರಿಗೆ ?
  • ಕರ್ನಾಟಕದ ಬೊಕ್ಕಸಕ್ಕೆ -ಅಂದರೆ ಕನ್ನಡಿಗರಿಗೆ.


  • 3.ನೀರು :-ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ನೀರಿನ ಕೊರತೆ ಇದೆ.ರಾಜ್ಯದ ರಾಜ್ಯಧಾನಿಯಾದ ಬೆಂಗಳೂರಿನಲ್ಲೆ ಪ್ರತಿಯೊಂದು ಬಡಾವಣೆಯಲ್ಲೂ ಎರಡು-ಮೂರು ದಿನಗಳಿಗೊಮ್ಮೆ ನೀರಿನ ಸಪ್ಲೈ ಇನ್ನು ಸಣ್ಣ ಊರುಗಳಲ್ಲತೂ ಒಂದು ಕೊಡ ನೀರಿಗಾಗಿ ಎರಡು- ಮೂರೂ ಕಿಲೋ ಮೀಟರು ಹೋಗಿ ಬರುವಂತ ಪರಸ್ಠಿತಿ .ಆದರೆ ಈ ಕಂಪನಿಗಳಿಗೆ, ಉದ್ಯಮಗಳಿಗೆ ನಮ್ಮ ಸರ್ಕಾರ 24/7 ನಿರಂತರವಾಗಿ ನೀರಿನ ಸಪ್ಲೈ ಮಡುತ್ತದೆ.
    ಈ ನೀರಿನ ನಿಜವಾದ ಹಕ್ಕುದಾರರು ಯಾರು ?
  • ನಮ್ಮ ಕನ್ನಡಿಗರು .


  • 4. ವಿದ್ಯುತ್ :ಬೆಂಗಳೂರನ್ನು ಬಿಟ್ಟು ಕರ್ನಾಟಕದ ಪ್ರತಿಯೊಂದು ಭಾಗದಲ್ಲಿ ವಿದ್ಯುತ್ತಿನ ಅಭಾವ ಇದೆ . ಪ್ರತಿಯೊಂದು ಊರಲ್ಲೂ ಜನರೇಟರ್ ಸಹಾಯವಿಲ್ಲದೆ ಯಾವುದೇ ಕೆಲಸವು ನಡೆಯುವುದಿಲ್ಲ. ಒಬ್ಬ ಒಂದು ಹೋಟೆಲ್ ನಡೆಸುತ್ತಿರಲಿ ಒಂದು ಕಿರಾಣಿ . ಆಥವಾ ಒಂದು ಬಟ್ಟೆ ಅಂಗಡಿ ಇಟ್ಟುಕೊಂಡಿರಲಿ ಜನರೇಟರ್ ಸಹಾಯವಿಲ್ಲದೆ ಅವನು ಯಾವ ವ್ಯಾಪಾರವನ್ನೂ ಕೆಲಸವನ್ನು ಮಾಡುವಂತಿಲ್ಲ .ಪ್ರತಿಯೊಂದು ಮನೆಯಲ್ಲೂ ಯು . ಪಿ ಎಸ್ ಇರಲೇ ಬೇಕಾದ ಪರಸ್ಠಿತಿ ಬಂದಿದೆ.

    ಹಳ್ಳಿಗಳಲ್ಲಿ ಬೆಳ್ಳಿಗ್ಗೆ 6 ಗಂಟೆಗೆ ಕರೆಂಟ್ ತೆಗೆದರೆ ಮತ್ತೆ 6 ಗಂಟೆಗೆ ಕರೆಂಟ್ ಬರುತ್ತದೆ ಇನ್ನೂ ಅವರು ಹೋಲ ಗದ್ದೆಗಳಿಗೆ ಹೋಗಿ ಉಣಿಸುವುದು ಯಾವಾಗ ? ಮಧ್ಯ ರಾತ್ರಿ ಹೋಗಿ ಪಂಪ್ ಸೆಟ್ ಆನ್ ಮಾಡಿ ಆಕಾಲದಲ್ಲಿ ಕೃಷಿ ಕೇಲಸ ಮಾಡಬೇಕಾಗುತ್ತದೆ . ಹೀಗೆ ರಾತ್ರಿಯಲ್ಲಿ ಪಂಪ್ ಸೆಟ್ ನಿಂದ ನೀರು ಬೀಡಲು ಹೋದಾಗ ಹಾವು ಕಚ್ಛಿ ಸತ್ತವರು ಎಷ್ಟೋ?ಕರಡಿ, ತೋಳಗಳ ದಾಳಿಗೆ ಗುರಿಯಾದವರು ಬಲಿಯಾದವರು ಎಷ್ಟೋ ? ಆದರೆ ನಮ್ಮ ಸರ್ಕಾರ ಮತ್ತು ಕಂಪನಿಗಳು ಮತ್ತು ಉದ್ಯಮಿಗಳು ಹವಾ ನಿಯಂತ್ರಿತ ಭವನಗಳಲ್ಲಿ ಕುಳಿತು ಕೆಲಸ ಮಾಡಲು ಮತ್ತು ಎರಡು - ಮೂರು ಪಾಳಿಗಳಲ್ಲಿ ಅವರ ಕಂಪನಿಗಳ ಕೆಲಸ ನಿರ್ವಹಿಸಲು ಬೇಕಾದ ವಿದ್ಯುತ್ತನ್ನು ನಿರಂತರವಾಗಿ ಸರಾಭ ರಾಜು ಮಾಡುತ್ತದೆ.
    ಈ ವಿದ್ಯುತ್ತಿನ ನಿಜವಾದ ಹಕ್ಕುದಾರರು ಯಾರು ?
  • ನಮ್ಮ-ಕನ್ನಡಿಗರು


  • 5. ತೆರಿಗೆ :-ಯಾರಾದರೂ ಒಬ್ಬ ಒಂದು ಸಣ್ಣ ವ್ಯಾಪಾರವನ್ನು ಆರಂಭಿಸಿದರೆ ಮೊದಲನೆಯ ದಿನದಿಂದಲೇ (ಸೇವಾ ತೆರಿಗೆ) ಮುಂತಾದ ತೆರಿಗೆಗಳನ್ನು ಕಟ್ಟಲೇಬೇಕು ,ಆದರೆ ನಮ್ಮ ರಾಜ್ಯದಲ್ಲಿ ಕಾರ್ಖಾನೆ,ಇಂಡಸ್ಟ್ರಿ ಅಥವಾ ಕಂಪನಿ ಪ್ರಾರಂಭವಾದರೆ ಅವು ಸುಗಮವಾಗಿ, . ಸುಭದ್ರವಾಗಿ ಇಲ್ಲಿ ಬೇರೂರಲ್ಲೂ ನಮ್ಮ ಸರ್ಕಾರ ಅವರಿಗೆ ಹತ್ತರಿಂದ ಇಪ್ಪತ್ತೈದು ವರ್ಷಗಳಷ್ಟು ಕಾಲ ತೆರಿಗೆ ನೀಡುತ್ತದೆ.
    ಹೀಗೆ ರಿಯಾಯತಿಯಾದ ತೆರಿಗೆ ಯಾರದು?
  • ನಮ್ಮ ಕನ್ನಡಿಗರದ್ದು.


  • 6. ಎಂಟ್ರಿ ಟ್ಯಾಕ್ಸ್ :-ಯಾವುದೇಕಾರ್ಖಾನೆ,ಇಂಡಸ್ಟ್ರಿ ಅಥವಾ ಕಂಪನಿ ಪ್ರಾರಂಭವಾದಗಾ,ಅವುಗಳ ಮೆಷಿನರಿಯಾಗಲಿ,ಕಂಪ್ಯೂಟಗೆ ಸಂಭಂದಿತ ವಸ್ತುಗಳನ್ನಾಗಲಿ . ವೀದೆಶಗಳಿದ ಆಮಾದು ಮಾಡಿಕೊಳ್ಳುತ್ತದೆ ನಮ್ಮ ಸರ್ಕಾರ ಅವುಗಳ ಆಮದು ಸುಂಕವನ್ನು ಮನ್ನಾ ಮಾಡುತ್ತದೆ.

    ಉದಾ:-ಒಬ್ಬ ಸಾಮಾನ್ಯ ಮನ್ಯುಷ್ಯ ಒಂದು ಕಂಪ್ಯೂಟರ್ ಆಮದು ಮಾಡಿಕೊಳ್ಳಬೇಕಾದರೆ ರೂ 40000/-ರಿಂದ ರೂ 50,000 ರೂಪಾಯಿಗಳಾಗುತ್ತವೆ. ಆದರೆ ಆ ಕಂಪ್ಯೂಟರ್ ಈ ಉದ್ಯಮಿಗಳಿಗೆ ಲಭ್ಯವಾಗುವುದು ಕೇವಲ ರೂ 5000/-ರೂ 6000/- ಇದರಿಂದ ರಾಜ್ಯ ಬೊಕ್ಕಸಕ್ಕೆ ಬಿದ್ದ ಖೋತ ಎಷ್ಟು ?
    ಆ ತೆರಿಗೆ ಸೇರಬೇಕಾದುದ್ದು ಯಾರಿಗೆ
  • ನಮ್ಮ ಕನ್ನಡಿಗರಿಗೆ


  • 7.ಒಂದು ಸಾವಿರ ಜನಕ್ಕೆ ಕೇಲಸ ಕೊಡುವಂತ ಒಂದು ಮೆಗಾ ಪ್ರಾಜೆಕ್ಟ್ ಪ್ರಾರಂಭಿಸಿದರೆ -ನಮ್ಮ ಸರ್ಕಾರ ಅವರಿಗೆ Concisions and Insentives ಕೊಡುತ್ತದೆ .(ಆದರೆ ಆ ಒಂದು ಸಾವಿರ ಜನ ಕನ್ನಡಿಗರಲ್ಲ) .
    ಈ Concisions and Insentives ನಿಜವಾದ ಹಕ್ಕುದಾರರು ಯಾರು ?
  • ನಮ್ಮ ಕನ್ನಡಿಗರು


  • 8. ನಮ್ಮ ರಾಜ್ಯದಲ್ಲಿ ಯಾರಾದರೂ ಒಂದು ಇಂಡಸ್ಟ್ರಿ ಅಥವಾ ಕಂಪನಿ ಪ್ರಾರಂಭಿಸುತ್ತೇವೆ ಎಂದಾಗ ನಮ್ಮ ಅವರನ್ನು ಪ್ರಾರಂಭಿಸಲು ಮೂಲಧನವನ್ನು ಕೂಡ ನೀಡುತ್ತದೆ.
    ಆ ಮೂಲಧನದ ಹಕ್ಕುದಾರರೂ ಯಾರು ?
  • ನಮ್ಮ ಕನ್ನಡಿಗರು


  • 9. ಐ .ಟಿ ಪಾರ್ಕ್ :ಈ ಐ.ಟಿ ಪಾರ್ಕ್ ಗಳನ್ನು ನೋಡಿದರೆ ನೀವು ಅಮೆರಿಕಾದಲ್ಲೊ ,ಯುರೋಪಿನಲ್ಲೋ ಇರುವಂತ ಭಾವನೆ ಬರುತ್ತದೆ. ಈ ಐ .ಟಿ ಪಾರ್ಕ್ ಗಳ ವೈಭವನ್ನು ನೋಡಿದರೆ ತಲೆ ತಿರುಗಿ ಬೀಳುವಂತ್ತಾಗುತ್ತದೆ .
  • ಏನೇನು ಇರುತ್ತದೆ ಈ ಐ .ಟಿ ಪಾರ್ಕ್ ಗಳಲ್ಲಿ

    • 1.ಹವಾ ನಿಯತ್ರಿತ ಭವನಗಳು (centrally Air condition buildings)

    • 2.ಪಂಚತಾರ (five star hotels)ಹೋಟೆಲ್ ಗಳು

    • 3.ಅತ್ಯಾಧುನಿಕವಾದ ರೆಸ್ಟೋರೆಂಟ್ ಗಳು

    • 4.ದೊಡ್ಡ ದೊಡ್ಡ ಶಾಪಿಂಗ್ ಮಾಲುಗಳು .

    • 5.24/7 ನಿರಂತರವಾದ ನೀರಿನ ಸಂಸ್ಥೆ.

    • 6.24/7 ನಿರಂತರವಾದ ವಿದ್ಯುತ್ನ ಸಪ್ಲೈ .

    • 7.ಸುಂದರವಾದ ಉದ್ಯಾನವನಗಳು (beautiful gardens).

    • 8.ಆಧುನಿಕವಾದ ವಸತಿ ಸಮೂಹಗಳು (morden Residential Apartments).

    • 9.ವೈಜ್ಞಾನಿಕ ಸಂಶೋಧನ ಅಭಿವೃದ್ದಿ ಕೇಂದ್ರಗಳು (Research and Development Center).

    • 10.ಅತಿ ಸೂಕ್ಷವಾದ ಭದ್ರತೆ (High End security).

    • 11.ಅತ್ಯಾಧುನಿಕವಾದ ಮನರಂಜನೆ ತಾಣ (Morden club house)

    • 12.ಸುಸಜ್ಜಿತವಾದ ರಸ್ತೆಗಳು (well planned broad road)

    • 13.ಸುಂದರವಾದ ಈಜುಕೊಳಗಳು(Beautiful Swimming polls ).

    • 14.ಸರ್ವಿಸ್ ಆಪಾರ್ಟ್ ಮೆಂಟ್ (service apartment).

    • 15.ತತ್ರಶಾಂ ಪ್ರಯೋಗ ಶಾಲೆಗಳು (software laboratory).

    • 16.ವ್ಯಾಯಮ ಶಾಲೆಗಳು (gymnasiums).

    • ಇಷ್ತೇಲ್ಲಾ ಆಧುನಿಕ ಸೌಕರ್ಯಗಳ ಹಕ್ಕುದಾರರು ಯಾರು ?

    • ನಮ್ಮ ಕನ್ನಡಿಗರು


  • 10.ಸ್ಪೆಷಲ್ ಇಕಾನಾಮಿಕ್ ಜೋನ್ ಎಸ್ ಇ ಜಡ್(ವಿಶೇಷ ಆರ್ಥಿಕ ವಲಯ) :-
  • ಇವುಗಳ ಆರಂಭಕ್ಕೆ ಕನಿಷ್ಟ ಹತ್ತು ಸಾವಿರ ಹೆಕ್ಟೇರ್ ನಷ್ಟು ಜಾಗ ಅಗತ್ಯ ನಿರ್ಧಿಷ್ಟ ವಲಯದಲ್ಲಿ ಕನಿಷ್ಟ ನೂರು .ಹೆಕ್ಟೇರ್ ನಷ್ಟು ಭೂಮಿಯಾದರೂ ಇರಲೇಬೇಕಾದ್ದು ಕಡ್ಡಾಯ .ಅದರಲ್ಲಿ ಪ್ರಾರಂಭವಾಗುವ ಯಾವುದೆ ಸಂಸ್ಥೆಗೆ ನೂರಾರು ಸೌಕರ್ಯಗಳು ಕನಿಷ್ಟ ದರದಲ್ಲಿ ಲಭ್ಯವಾಗುತ್ತದೆ.
  • ಉದಾ:ಹೊರಗಡೆ ಬಾಡಿಗೆ ಒಂದು ಅಡಿಗೆ ರೂ 2000/-ದಿಂದ ರೂ 4000/- ಆದರೆ ,ಈ ವಿಶೇಷ ಆರ್ಥಿಕ ವಲಯದಲ್ಲಿ ಒಂದು ಚದುರ ಅಡಿಗೆ ಕೇವಲ ರೂ 34/-ಮಾತ್ರ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತದೆ ಆದರೆ ಅವು ಕನ್ನಡಿಗರ ಕನಸಿನ ಕನ್ನಡಿ
    ಈ ವಿಶೇಷ ಆರ್ಥಿಕ ವಲಯದ ನಿಜವಾದ ಅರ್ಹರು ಯಾರು?
  • ನಾವು ಕನ್ನಡಿಗರು


  • 11. ಕಾರ್ಮಿಕರ ಕಾನೂನು (labours laws):-ಐಟಿ-ಬಿಟಿ ಕಂಪನಿಗಳನ್ನು ಪ್ರೋತ್ಸಾಹಿಸಲು, ನಮ್ಮ ಸರ್ಕಾರ ಇವುಗಳಿಗೆ ಹನ್ನೇರಡು ವರ್ಷಗಳಷ್ಟು ಕಾಲ ವಿನಾಯಿತಿ ನೀಡಿತ್ತು .ಅಂದರೆ ಕಂಪನಿಗಳು ಯಾರನ್ನಾದರೂ ,ಯಾವಾಗಾದರೂ ,ವಿನಾಕಾರಣ ಕೂಡಾ ಕೆಲಸಗಾರರನ್ನು ಕೆಲಸದಿಂದ ಕಿತ್ತು ಹಾಕಬಹುದು.ಇ ವಿನಾಯಿತಿ 31-12-2012ಕ್ಕೆ ಮುಗಿದಿದೆ ಈ ಐಟಿ-ಬಿಟಿ ಕಂಪನಿಗಳ ಒತ್ತಾಯದಿಂದ ನಮ್ಮ ಸರ್ಕಾರ ಅದನ್ನು ಇನ್ನೂ ಮುಂದುವರೆಸುತ್ತಾ ಬಂದಿದೆ.
    ನಾವು ಇಷ್ಟೆಲ್ಲ ಸೌಕರ್ಯಗಳನ್ನು ಹೊರಗಿನಿಂದ ಬಂದವರಿಗೆ ಕೊಟ್ಟಿದ್ದೇವೆ.
  • ಉದ್ಯೋಗಗಳನ್ನು ಮಾಡದ ಕನ್ನಡಿಗರ ಬದುಕು ಕೂಡಾ ಅವರ ಹಿಂದಿನ ಜೀವನದ ಗುಣಮಟ್ಟಕ್ಕಿಂತ ತುಂಬಾ ಕೆಳಮಟ್ಟಕ್ಕೆ ಜಾರಿದೆ.
  • ಹೇಗೆಂದರೆ

    • 1.ಸೈಟಿನ ಬೆಲೆ ಗಗನ ಮುಟ್ಟಿದೆ,ಒಬ್ಬ ಸಾಮಾನ್ಯ ಕನ್ನಡಿಗ ಬೆಂಗಳೂರನಲ್ಲಿ ಮನೆ ಮಾಡಲು ಸಾಧ್ಯವಾಗುತ್ತಿಲ್ಲ .

    • 2ಮನೆ ಬಾಡಿಗೆಗಳು ಆಕಾಶಕ್ಕೆರಿವೆ ರೂ2000/-ರೂ3000/-ದಲ್ಲಿ ಸಿಗುತ್ತಿದ್ದ ಮನೆಗಳು ರೂ15000 /- ರೂ 20000/-ಗಳಾಗಿವೆ .

    • 3.ಭೂಮಿ ಒಳಗೆ ಬೆಂಗಳೂರು,ಭೂಮಿ ಮೇಲೆ ಬೆಂಗಳೂರು ,ಆಕಾಶದಲ್ಲಿ ಬೆಂಗಳೂರು. ಹತ್ತು ಜನ ವಾಸಿಸುವ ಸ್ಥಳದಲ್ಲಿ ಸಾವಿರ ಜನರ ವಾಸ....

    • 4.24 ಗಂಟೆಗಳ ಕಾಲ ಎಡೆ ಬೀಡದೆ ನೀರು ಸುರಿಸುತ್ತಿದ್ದ ಬೆಂಗಳೂರಿನ ಕೊಳಾಯಿಗಳು ಈಗ 3-4 ದಿನಗಳಿಗೊಮ್ಮೆ ನೀರು ಸುರಿಸುತ್ತಾ ಇವೆ. ನೀರಿನ ದರ ಕೂಡಾ ಹತಿ ಹೆಚ್ಚಾಗಿದೆ.

    • 5.ವಿದ್ಯುತ್ ಅಭಾವ ಮತ್ತು ವಿದ್ಯುತ್ ದರ ಹೇಳಲಾದಷ್ಟು ಆಗಿವೆ.

    • 6.ವಾಹನಗಳ ದಟ್ಟಣೆಯಂತ್ತು ಹೇಳಲು ಅಸಾಧ್ಯ .

    ಎಲ್ಲಾ ಕಡೆ ಸಂಚಾರ ಸಮಸ್ಯೆ (traffic problem) ಮತ್ತು ಎಲ್ಲಾ ಕಡೆ ಪಾರ್ಕಿಂಗ್ ತೊಂದರೆ .

  • 1.ಎತ್ತ ತಿರುಗಿದರು ವಾಯ್ಯು ಮಾಲಿನ್ಯ,ಶಬ್ದ ಮಾಲಿನ್ಯ,ಪರಿಸರ ಮಾಲಿನ್ಯ ಇವೆಲ್ಲಾವುದರಿಂದ ಬೆಂಗಳೂರು ರೋಗಗಳ ಆಗರವಾಗಿದೆ.

  • 2.ವಿಶ್ರಾಂತಿ ಜೀವನ ನಡೆಸುವವರಿಗೆ ಆಗ ಬೆಂಗಳೂರು ಸ್ವರ್ಗತುಲ್ಯವಾಗಿತ್ತು .ಆದರೆ ಈಗ ನರಕ ಸದ್ರುಶವಾಗಿದೆ.(pensionner paradise ಯಿಂದ pensinner hell ಆಗಿದೆ) ಒಂದೇ ಎರಡು ಪಟ್ಟಿ ಮಾಡುತ್ತಾ ಹೋದರೆ ,ನೂರಾರು ಸೌಕರ್ಯಗಳು, ಸವಲತ್ತುಗಳು,ರಿಯಾಯಿತಿ ,ವಿನಾಯಿತಿ ಈ ಉದ್ಯಮಿಗಳು ಕರ್ನಾಟಕದಿಂದ ಕನ್ನಡಿಗರಿಂದ ಪಡೆಯುತ್ತಿದಾರೆ ಅದಕ್ಕೆ ಬದಲಾಗಿ ಅವರು ನಮಗೆ ಕೊಟ್ಟಿರುವುದೇನು..? ಎ ಬಿಗ್ ಜೀರೋ ( A Big Zero )

ಇದರಲ್ಲಿ ಕೆಲಸ ಮಾದುತ್ತಿರುವ ನಮ್ಮ ಕನ್ನಡಿಗರ ಸಂಖ್ಯೆ ಕೇವಲ 20%-40? ಮಾತ್ರ. ಕೆಲಸ ಮಾದುತಿರುವರು ಕೂಡ ಅವರ ಅರ್ಹತೆಗಿಂತಾ ಕಡಿಮೆ ಸ್ಥಾನದಲ್ಲಿ ಕೆಲಸ ಮಾದುತ್ತಿದಾರೆ

  • 80% - ವಲಸಿಗರು
  • 20% - ಕನ್ನಡಿಗರು

20%- ಕನ್ನಡಿಗರು ಈ ಪರಿಸರದಲ್ಲಿ ಕೆಲಸ ಮಾದುತ್ತಿರುರವ ಕನ್ನಡಿಗರ ಪರಸ್ಥಿತಿ ಹೇಗಿರುತ್ತೇ ? ನೀವೇ ಯೋಚಿಸಿ ಕರ್ನಾಟಕದಲ್ಲಿ ಹೊರ ರಾಜ್ಯದ ಹಾವಳಿ ಹೆಚ್ಚು ,ಈ ಪರಸ್ಥಿತಿ ಭಾರತದ ಇತರ ರಾಜ್ಯಗಳಿಗೆ ಏಕ್ಕಿಲ್ಲ ?.ನಮ್ಮ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ,ಮಹಾರಾಷ್ಟ್ರಕ್ಕೆ ಏಕ್ಕಿಲ್ಲ? ಕರ್ನಾಟಕದಲ್ಲಿ ಒಂದು ಕಂಪನಿ ಪ್ರಾರಂಭವಾಗುತ್ತದೆ ಅಂದರೆ ಸ್ಥಾಪಕ ಅಮೆರಿಕದಲ್ಲೋ ,ಯುರೋಪಿನಲ್ಲೋ ಇರುತ್ತಾನೆ ,ಇಲ್ಲಿಯ ವ್ಯವಹಾರಗಳನ್ನು ನೋಡಿಕೊಳ್ಳಲು ಅವರು ಒಬ್ಬ ಸೀನಿಯರ್ ಮ್ಯಾನೇಜರನ್ನು ನೇಮಿಸುತ್ತಾರೆ .ಆತ ಬೆಂಗಾಲಿಯಾಗಿದ್ದರೆ ಆತ ಕನ್ನಡಿಗರನ್ನು ಕಡೆಗಣಿಸಿ ಎಲ್ಲಾ ಬೆಂಗಾಲಿಗಳನ್ನೇ ಆ ಸಂಸ್ಥೆಗೆ ನೇಮಿಸಿಕೊಳ್ಳುತ್ತಾನೆ . ಅದೇ ಮರಾಟಿಗನಾಗಿದ್ದರೆ ಕನ್ನಡಿಗರನ್ನು ಪಕ್ಕಕೆ ತಳ್ಳಿ ಬರೀ ಮರತಿಗರಿಂದ ಕಂಪನಿಯನ್ನು ತುಂಬಿಸುತ್ತಾನೆ . ಹೀಗೆ ಬಂದವರೆಲ್ಲಾ ಬೃಹಸ್ವತಿಗಳೇನೂ ಅಲ್ಲ,ಕೇವಲ ಒಳದಾರಿಯಿಂದ,ಅಡ್ಡದಾರಿಯಿಂದ ಕನ್ನಡಿಗರ ಹಕ್ಕನ್ನು ಕದ್ದು ಒಳ ಬಂದವರು.

ಇದರಲ್ಲಿ ಕೆಲಸ ಮಾದುತ್ತಿರುವ ನಮ್ಮ ಕನ್ನಡಿಗರ ಸಂಖ್ಯೆ ಕೇವಲ 20%-40? ಮಾತ್ರ. ಕೆಲಸ ಮಾದುತಿರುವರು ಕೂಡ ಅವರ ಅರ್ಹತೆಗಿಂತ್ತಾ ಕಡಿಮೆ ಸ್ಥಾನದಲ್ಲಿ ಕೆಲಸ ಮಾದುತ್ತಿದಾರೆ

1.ಹೀಗೆ ಕನ್ನಡಿಗರ ಮೇಲೆ ಈ ದೌರ್ಜನ್ಯ ಮುಂದುವರೆದರೆ ನಮ್ಮ ರಾಜಕೀಯ ನಾಯಕರಿಗೆ ಓಟು ಹಾಕಲು ಇಲ್ಲಿ ಕನ್ನಡಿಗರು ಇರುವುದಿಲ್ಲ .

2.ನಮ್ಮ ಸಾಹಿತಿಗಳು ,ಕವಿಗಳು,ಬಾರಿ ಶಹಬಾಸ್ ಗಿರಿ ಪಡೆಯಲು,ಪ್ರಶಸ್ತಿಗಳನ್ನು ಪಡೆಯುವುದರಲ್ಲಿ ಕಾಲ ಕಳೆಯುತ್ತಿದ್ದಾರೆ .ನಾಳೆ ಅವರ ಸಾಹಿತೆಗಳನ್ನು ಓದಲು ಇಲ್ಲಿ ಕನ್ನಡಿಗರು ಇರುವುದಿಲ್ಲ

3.ಕನ್ನಡ ಸಿನಿಮಾದವರು ಮತ್ತು ಕನ್ನಡ ಕಿರುತೆರೆಯವರು ಕನ್ನಡಿಗರ ಇಂದಿನ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ .ನಾಳೆ ಅವರ ಸಿನಿಮಾವನ್ನು ಅವರ ಧಾರವಾಹಿಗಳನ್ನು ನೋಡಲು ಇಲ್ಲಿ ಕನ್ನಡಿಗರು ಇರುವುದಿಲ್ಲ .

ಹೀಗೆ ಮುಂದುವರೆದರೆ ನಮ್ಮ ಕನ್ನಡಿಗರ ರಾಜ್ಯವಾದ ಈ ಕರ್ನಾಟಕ ಕೆಲವೇ ವರ್ಷಗಳಲ್ಲಿ "ವಲಸಿಗರ ರಾಜ್ಯ"ವಾಗುವುದು ಖಂಡಿತ

ಐಟಿಬಿಟಿ ಮಂದಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ(uinion terriotery)ಮಾಡಬೇಕೆಂದು ತೀವ್ರ ಪ್ರಯತ್ನ ಮಾಡುತಿದ್ದಾರೆ ಈಗ ಕನ್ನಡಿಗರು ಎಚ್ಚತ್ತುಕೊಳ್ಳದಿದ್ದರೆ ರಾಜ್ಯದ ರಾಜ್ಯಧಾನಿಯಾದ ಬೆಂಗಳೂರು ಅವರ ಕೈ ತಪ್ಪುವುದು ಖಂಡಿತ

ಇದನ್ನೆಲ್ಲಾ ತಡೆಯುವುದು ಹೇಗೆ ? ಇದಕ್ಕೆ ಪರಿಹಾರವೇನು?

ಈ ಎಲ್ಲಾ ಸಮಸ್ಯಗಳಿಗೆ ಉತ್ತರ.

ಕನ್ನಡಿಗರ ಉದ್ಯೋಗ ವೇದಿಕೆ

ನಮ್ಮ ಸಂಸ್ಥೆಯು ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಹೋರಾಟ ಮಾಡುತ್ತಾ ಇದೆ.ಕರ್ನಟಕದ ಉಳಿವಿಗಾಗಿ ಎಲ್ಲಾ ಕನ್ನಡಿಗರನ್ನು ಒಂದೇ ವೇದಿಕೆಯ ಮೇಲೆ ತರಲು ಪ್ರಯತ್ನಿಸುತ್ತಿದೆ.

                                                                                    

ದೇಣಿಗೆ

ಸದಸ್ಯತ್ವ

ಡಾ:ಸರೋಜಿನಿ ಮಹಿಷಿ ಸಮಿತಿಯ ವರದಿ