Select the language

ಮುಂದಿನ ಕ್ರಿಯಾ ಚಟುವಟಿಕೆಗಳು


ನಮ್ಮ ಧ್ಯೇಯವು ಸಮಸ್ತ ಕನ್ನಡಿಗರನ್ನು ಒಟ್ಟುಗೂಡಿಸಿ, ಅವರ ಉದ್ಯೋಗದ ಹಕ್ಕಿಗಾಗಿ ಹೋರಾಡುವುದು



ಯೋಜನೆಯ ಕೆಲವು ಚಟುವಟಿಕೆಗಳು:

  • ಕನ್ನಡಿಗರಿಗೆ ಶೇ ೧೦೦ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಹೋರಾಡುವುದು.
  • ತಮ್ಮ ಉದ್ಯೋಗದ ಹಕ್ಕು ಹಾಗು ಅವಕಾಶಗಳ ಕುರಿತು ಕನ್ನಡಿಗರಲ್ಲಿ ಜಾಗ್ರತೆ ಮೂಡಿಸುವುದು.
  • ಈ ಸಲುವಾಗಿ ಎಲ್ಲ ಕನ್ನಡಿಗರನ್ನು ಒಂದಾಗಿಸುವುದು.
  • ತಾಲ್ಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಉಚಿತ "ಸಂದರ್ಶನ ಎದುರಿಸುವ ಕುರಿತು" ತರಬೇತಿ ನೀಡುವುದು.
  • ಇಂಗ್ಲೀಷ್ ಮಾತನಾಡುವುದನ್ನು ಕಲಿಸುವುದು.
  • ವ್ಯಕ್ತಿತ್ವ ವಿಕಸನ ತರಗತಿಗಳನ್ನು ನಡೆಸುವುದು.
  • ಮೃದು ಕೌಶಲ್ಯ ತರಗತಿಗಳನ್ನು ನಡೆಸುವುದು.
  • ಈ ನೆಲದ ಮಕ್ಕಳಿಗೆ ಅಂದರೆ ಕನ್ನಡಿಗರಿಗೆ ಶೇ ೧೦೦ ನೌಕರಿ ನೀಡುವಂತೆ/ಆದ್ಯತೆ ನೀಡುವಂತೆ ಖಾಸಗಿ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಆಗ್ರಹಿಸುವುದು.


ಕೆಳಗಿನ ಯೋಜನೆಗಳು ’ಸಿ’ ಮತ್ತು ’ಡಿ’ ವರ್ಗದವರಿಗೆ ಸಹಾಯವಗುತ್ತದೆ. (ಸಿ ಮತ್ತು ಡಿ ವರ್ಗದಲ್ಲಿ ಅವಿದ್ಯಾವಂತ/ಅಲ್ಪ ವಿದ್ಯಾವಂತರು ಸೇರುತ್ತಾರೆ) ಇದರಲ್ಲಿ ಚಾಲಕರು, ಬಡಗಿ, ಸೆಕ್ಯೂರಿಟಿ, ಎಲೆಕ್ಟ್ರಿಷಿಯನ್, ಮಾಲಿ, ಮೇಸ್ತ್ರಿ, ಜವಾನ ಮುಂತಾದವರು ಸೇರುತ್ತಾರೆ.


  • ಈ ವರ್ಗದವರ ಗುಂಪುಗಳನ್ನು ಮಾಡಿ ಪರಸ್ಪರ ಸಹಕಾರಕ್ಕೆ ಉತ್ತೇಜಿಸುವುದು
  • ಅವರ ಜನ್ಮಸಿದ್ಧ ಹಕ್ಕುಗಳ ಅರಿವು ಮೂಡಿಸುವುದು