ಐಬಿಪಿಸ್ (I.B.P.S)ಆಯ್ಕೆ
ಕೆಯುವಿ ಪ್ರಯತ್ನದಿಂದ 2623 ಜನರ ಪೈಕಿ ಸುಮಾರು 2000 ಕನ್ನಡಿಗರಿಗೆ 2014 ಮಾರ್ಚ್-ಏಪ್ರಿಲ್ ಐಬಿಪಿಸ್ ಬ್ಯಾಂಕ್ ಉದ್ಯೋಗ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿರುತ್ತಾರೆ.
ಪ್ರತಿ ಸಾರಿ ನಡೆಯುತಿದ್ದ ಬ್ಯಾಂಕಿನ ಹುದ್ದೇಗಳು ಆಂಧ್ರದ ಅಭ್ಯರ್ಥಿಗಳ ಪಾಲಾಗುತ್ತಿದ್ದವು .(ಹೇಗೆಂದರೆ ಆಂಧ್ರದ ನಂದ್ಯಾಲ ಮತ್ತು ಕರ್ನೂಲ್ ಎಂಬ ಊರುಗಳಲ್ಲಿ ಬ್ಯಾಂಕಿನ ತರಬೇತಿ ಕೇಂದ್ರಗಳು ಇವೆ .ಆ ತರಬೇತಿ ಕೇಂದ್ರದ ಮುಖ್ಯಸ್ಥರಿಗೂ ಮತ್ತು ಇಲ್ಲಿನ ಬ್ಯಾಂಕಿನ ಆಯ್ಕೆಯ ಅಧಿಕಾರಿಗಳಿಗೂ ಹೊ ದ್ದಾಣಿಕೆ ಇದ್ದು ಪ್ರತಿ ವರ್ಷ ಆ ಕೇಂದ್ರಗಳಿಂದ ಬಂದ ಅಭ್ಯರ್ಥಿಗಳೇ ಒಳ ದಾರಿಯಿಂದ ಆಯ್ಕೆಯಾಗುತ್ತಿದ್ದರು ).ಇದನ್ನು ಮನಗಂಡ ಕನ್ನಡ ಉದ್ಯೋಗ ವೇದಿಕೆಯು ಪರೀಕ್ಷೆಯನ್ನು ನಡೆಸುವ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಿತ್ತು.2013-2014ರ ಸಂದರ್ಶನದ ವೇಳೆಯಲ್ಲಿ ಮೊಟ್ಟ ಮೊದಲನೆಯ ಬಾರಿಗೆ, ಕರ್ನಾಟಕದಲ್ಲಿ ಕನ್ನಡ ಪ್ರಭಂದವನ್ನು ಬರೆಯಲು ಕೊಟ್ಟಿದ್ದರು. ಈ ಪ್ರಭಂದವನ್ನು ಬೇರೆ ರಾಜ್ಯಗಳಿಂದ ಬಂದ ಅಭ್ಯರ್ಥಿಗಳು ಬರೆಯಲು ಸಾಧ್ಯವಿಲ್ಲ ,ಆದ್ದರಿಂದ ಈ ವರ್ಷ 2823 ಹುದ್ದೇಗಳ ಪೈಕಿ "ಕನ್ನಡಿಗರ ಉದ್ಯೋಗ ವೇದಿಕೆಯ ಪ್ರಯತ್ನದಿಂದ 2172 ಹುದ್ದೇಗಳು ಕನ್ನಡಿಗರಿಗೆ ಲಭ್ಯವಾಗಿವೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಎ.ಬಿ.ಸಿ.ಡಿ. ಗ್ರೇಡುಗಳಲ್ಲಿ ಕೆಲಸ ಮಾಡುವವರ ವಿವರ.
ಕನ್ನಡಿಗರನ್ನು ರಕ್ಷಿಸಿ – ಕರ್ನಾಟಕವನ್ನು ಉಳಿಸಿ
ಬ್ಯಾಂಕ್ ಉದ್ಯೋಗಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ದಿನಾಂಕ 13/07/2015 ರಂದು ಸ್ವತಂತ್ರ್ಯ ಉದ್ಯಾನವನ (Freedom Park ) ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹವನ್ನು ಮಾಡಲಾಯಿತು.